ಭಾವನೆಗಳ ನಡುವೆ
ಮನುಷ್ಯ ಬದುಕುತ್ತೀರುವುದು ಉಸಿರಾಟದಿಂದ. ಆದರೆ ನಮ್ಮನ್ನು ನಿಜವಾಗಲು ಬದುಕಿಸುತ್ತೀರುವುದು ನಮ್ಮ ಭಾವನೆಗಳು. ನಾವು ಹುಟ್ಟಿನಲ್ಲಿ ಯಾವುದೇ ರೀತಿಯ ಸಂಭದಗಳಿಲ್ಲದೆ ಹುಟ್ಟುತ್ತೀವಿ ಬೆಳೆಯುತ್ತಾ ತಾಯಿಯ ಪ್ರೀತಿ , ತಂದೆಯ ಹಾರೈಕೆ ಎಂಬ ಭಾವನೆಗಳೂಂದಿಗೆ ಪಯಣ ಶುರುಮಾಡುತ್ತೇವೆ.ಬೆಳೆಯುತ್ತಾ ಸಹೋದರ ವಾತ್ಸಲ್ಯ,ಬಂಧುಬಳಗ,ಗೆಳೆಯರು ಹೀಗೆ ನಮ್ಮದೆ ಭಾವನೆಗಳಲ್ಲಿ ಉಸಿರಾಡುತ್ತೇವೆ. ನಮಗೆ ನಮ್ಮ ಸಂಸಾರ,ಮಕ್ಕಳು ಬಂದ ನಂತರ ಸ್ವಾರ್ಥವೆಂಬ ಭಾವನೆಗಳು ಶುರುವಾಗುತ್ತದೆ. ನಾನು ಎಂಬ ಅಹಂಕಾರ ಹುಟ್ಟಿನಿಂದ ಬಂದ ಸಂಬಂಧಗಳನ್ನು ಮರಿಯುವಂತೆ ಮಾಡುತ್ತದೆ. ಯಾರು ಎಲ್ಲಾ ಸಂಭದಗಳನ್ನು ಸರಿಯಾದ ಭಾವನೆಗಳೂಂದಿಗೆ ಸಾಗಿಸುತ್ತಾರೋ ಅವರೆ ನಿಜವಾದ ಸುಖಿಗಳು.