ಇಂಗ್ಲಿಷ್ ಎಂಬ ಭೂತ ಕನ್ನಡವ ನುಂಗಿತ್ತು
ಮೊನ್ನೆ ಮಗಳಿಗೆ ಕನ್ನಡ ಕಲಿಸುವಾಗ ನಮ್ಮ ಮನೆ ಸ್ವಚ್ಚ ಮಾಡುವಾಕೆ ಹೇಳಿದಳು ಅಮ್ಮ ನಾನು ಕೆಲಸಮಾಡುವುದು ಕನ್ನಡ ಜನರ ಮನೆಯಲ್ಲಿ ಅದರೆ ಅವರ ಮನೆಯಲ್ಲಿ ಯಾರು ಕನ್ನಡ ಮಾತಾಡಲ್ಲ ಬೆಂಗಳೂರಲ್ಲಿ ಕನ್ನಡ ಜನ ಯಾಕೆ ಮನೆಲ್ಲಿ ಇಂಗ್ಲಿಷ್ ಮಾತಾಡುತ್ತಾರೆ?
ನಾನು ಕನ್ನಡ ಪಾಠಮಾಡುತ್ತೇನೆ ನನ್ನ ಹತ್ತಿರ ಕನ್ನಡವರ ಮಕ್ಕಳು ಬರುತ್ತಾರೆ ಅದರೆ ಅವರಿಗೆ ಕನ್ನಡ ಬರಲ್ಲ. ಅವ್ರು ಕನ್ನಡ ಸಿನಿಮಾನೊಡಲ್ಲಂತೆ.
ತಮಿಳ್ ,ತೆಲುಗು, ಹಿಂದಿ ,ಮಲಾಯಳಮ್ ಎಲ್ಲರು ಅವರ ಮಾತ್ರುಭಾಷೆ ಮಾತಾಡುತ್ತಾರೆ ಅದರೆ ನಾವು ಮಾತ್ರ ಎಲ್ಲಾ ಮರೆಯುತ್ತೀದ್ದೆವಿ.
ಗಂಡ , ಹೆಂಡತಿ, ಮಕ್ಕಳು ಎಲ್ಲಾರು ಇಂಗ್ಲಿಷ್ ನಲ್ಲಿ ಮಾತಾಡುವುದು ಯಾಕೆ ಗೊತ್ತಿಲ್ಲ.
ಆದರೆ ಇದು ಒಳ್ಳೆಯದಂತು ಅಲ್ಲ.
Comments
Post a Comment