ತಮ್ಮ ಬಳಿ ಏನಿದೆ ಎಂಬುದರ ಅರಿವಿರುವುದಿಲ್ಲ ಅದು ಕಳೆಯುವ ತನಕ

ಎಲ್ಲ ಇದ್ದವರಿಗೆ ತಮ್ಮ ಬಳಿ ಏನಿದೆ ಎಂಬುದರ ಅರಿವಿರುವುದಿಲ್ಲ. ನನ್ನ ಗೆಳತಿ ಮೊದಲು ಯಾವಗಲು ತುಂಬ busy ಆದರೆ ಮಗುವಾಗುವಾದ ಮೇಲೆ  ಕೆಲಸಬಿಟ್ಟಳು ಆಗ ಅವಳಿಗೆ ತಿಳಿಯಿತು ಸುಮ್ಮನೆ ಕುರುವುದು ಕಷ್ಟ ಎಂದು. ಮೊದಮೊದಲಿಗೆ ಅವಳಿಗೆ ತುಂಬ ಬೆಸರ ಕಾಡುತ್ತಿತ್ತು. ಮಗು ಹಾಗು ಸಂಸಾರಕ್ಕಾಗಿ ಕೆಲಸ ಬಿಡಬಾರದಿತ್ತೆಂದು ಕೋರಗುತ್ತಿದ್ದಳು. ಮತ್ತೆ ಕೆಲಸಕ್ಕೆ ಸೆರಿದಳು ಅದರೆ ಮಗುವಿನ ನೆನಪು ಕಾಡತೊಡಗಿತು ಮತ್ತೆ ಮೊದಲಿನಂತೆ ಕೆಲಸಮಾಡಲಗಲಿಲ್ಲ. ಯಾವ ಕೆಲಸದಲ್ಲು ಒಂದು ತಿಂಗಳು ಕೂಡ ಇರಲಿಲ್ಲ. ಓಮ್ಮೆ ನಾವು ಮಾತಾಡುವಾಗ ನಾನು ನನ್ನ ಬೇರೆ ಗೆಳತಿಯರು ಹೇಳಿದೆವು ನೀನು ಮೊದಲು ನಿನ್ನ ಬಳಿ ಇರುವುದನ್ನು ಖುಷಿಪಡು. ಮಗುವಿನ ಬಳಿ ಇರಲು ಎಷ್ಟೋ ತಾಯಂದಿರು ಬಯಸುತ್ತಾರೆ. ನಿನ್ನ ಮನಸ್ಸಿಗೆ ಏನು ಮುಖ್ಯ ನಿರ್ಧರಿಸು. ನಮ್ಮ ಮನಸ್ಸು ಎಷ್ಟೂ ವಿಚಿತ್ರಾ ಹಾಗು ಚಂಚಲ ಅಲ್ವ? ಎಲ್ಲ ಇದ್ದವರಿಗೆ ತಮ್ಮ ಬಳಿ ಏನಿದೆ ಎಂಬುದರ ಅರಿವಿರುವುದಿಲ್ಲ. ಒಂದು ಬಾರಿಕಳೆದು ಕೊಂಡವರಿಗೆ ಗೊತ್ತು ಅದರ ಮಹತ್ವ. ತಾಯಿಯ ಪ್ರೀತಿ ಸಿಗದ ಮಗುವಿಗೆ ಬೇರೆಯವರು ತಮ್ಮ ಮಕ್ಕಳನ್ನು ಪ್ರಿತಿಸುತ್ತಿದ್ದಾಗ ಏನೊ ಒಂದು ತಳಮಳ. ಅದೆ ತಾಯಿಯಪ್ರೀತಿ ಕೆಲವರಿಗೆ ಅತಿರೇಕ. ಮಗುವಿಲ್ಲದವರಿಗೆ ಗೊತ್ತು ಮಕ್ಕಳಿಲ್ಲದ ಬದುಕು ಏನೆಂದು ಮಗುವದಾವರಿಗೆ ಮಕ್ಕಳು ಯಾಕೆಂದು 😃 ಒಂಟಿ ಯಾಗಿ ಇರುವವರಿಗೆ ಇನ್ನು ತನಗೆ ಜೊತೆಇಲ್ಲ ಎಂಬ ಸಂಕಟ ಜೊತೆ ಇರುವವರಿಗೆ ಏನೊ ಸಂಕಟ. ಅತ್ತೆ ಇಲ್ಲದ ಸೊಸೆಗೆ ಬೇರೆಯವರ ಅತ್ತೆ ಕಂಡರೆ ಅಕ್ಕರೆ. ಅತ್ತೆ ಇರುವ ಸೊಸೆಗೆ ಅತ್ತೆ ಎಂದರೆ ಸಂಕಟ. ಕೆಲಸವಿರುವ ಮಹಿಳೆಗೆ ಮನೆಯಲ್ಲಿರುವ ಮಹಿಳೆ ಸುಖಿ ಕಂಡರೆ,  ಮನೆಯೋಂದೆ ಜೀವನವೆ ಎಂಬುದೆ ಗೃಹಿಣಿಯಸಂಕಟ. ನಮ್ಮಲ್ಲಿ ನಾವು ತೃಪ್ತಿ ಪಡದಿದ್ದರೆ ಅದು ಕೊನೆವರಗು ಸಿಗುವುದಿಲ್ಲ. ನಮ್ಮ ಜೀವನ ಬೇರೊಬ್ಬರ ಕನಸು. "our life is some ones big dream".. ಮಾಡುವ ಕೆಲಸ ಯಾವುದಾದರೆನು ಅದನ್ನು ಮನಸ್ಸಿನಿಂದ ಮಾಡಬೇಕು. ಖುಷಿಯಾಗಿರಲು !! ಪ್ರಯತ್ನಿಸಬೇಕು. ನಾವು ನಮ್ಮ ಮನಸ್ಸು ಚೆನ್ನಾಗಿದ್ದರೆತಾನೆ ಮನೆ ಚೆನ್ನಗಿರತ್ತೆ. ಮನೆ ಯ ಜನರನ್ನು ಕುಟುಂಬವನ್ನು ಪ್ರಿತಿಸೋಣ ಎಷ್ಟೋ ಜನರಿಗೆ ಕುಟುಂಬವೆ ಇಲ್ಲ. ದುಡಿಮೆಯ ಬರದಲ್ಲಿ ನಾವು ಮಕ್ಕಳಿಗೆ ಸಮಯ ಕೊಡುತ್ತಿಲ್ಲ ಸಂಬಧಗಳನ್ನು ಮರೆಯುತ್ತಿದ್ದೆವೆ. ಸುಂದರವಾದ ಮಗುವಿದ್ದಾಗ ಮನೆಯೊಂದಿದ್ದರೆ ಸಾಕು ಇನ್ನೇನು ಬೇಕು ಜೀವನದಲ್ಲಿ.

Comments

Popular posts from this blog

Conversation with Maid in Kannada

Spoken kannada - Conversation in vegetable market

Spoken Kannada Basic # Easy Sentences