ಕೆಟ್ಟಚಟ ವಿದ್ದವರೆಲ್ಲ ಕೆಟ್ಟವರಲ್ಲ
ಅಫಿಸ್ ನಲ್ಲಿ ಕೆಲಸ ಮಾಡುವಾಗ ಮೊದಮೊದಲಿಗೆ ತುಂಬ ಮಾಡ್ರನ್ ಜನಗಳೂಂದಿಗೆ ಮಾತಡುವುದು ಕಷ್ಟವಾಗುತ್ತಿತ್ತು.ನನ್ನ ಉಡುಗೆ ಬೇರೆ ಹುಡುಗಿಯರ ತೊಡುಗೆ ಬಹಳ ವಿಭಿನ್ನ. ನನ್ನ ಅನಿಸಿಕೆಯಲ್ಲಿ ನಾನು ಅವರ ವಿಚಾರಗಳ ರೀತಿ ಭಿನ್ನ ವಾಗಿದೆ ಎಂದು ತಿಳಿದು ಸ್ವಲ್ಪ ದೂರವೆ ಯಿರುತ್ತಿದ್ದೆ. ಓಮ್ಮೆ ಅಫಿಸಿಗೆ ಹೊಸ ಹುಡುಗಿ ಸೇರಿದಳು ಅವಳಬಗ್ಗೆ ಸ್ವಲ್ಪ ದಿನದ ನಂತರ ಏನೊ ಗುಸು ಗುಸು. ಸಿಗರೇಟ್ , ಕುಡಿತ ಎಲ್ಲ ಇದೆ ಅವಳು ತನ್ನ ಕುಟುಂಬದ ಜೊತೆ ಇಲ್ಲ ಎಂಬ ಸುದ್ದಿಗಳು. ನೊಡಲು ಸಣ್ಣ ಹುಡುಗಿಯಂತಿದ್ದಳು. ನಾನು ಅಕೌಂಟೆಂಟ್ ಅದ್ದರಿಂದ ಹೊಸದಾಗಿ ಕೆಲಸಕ್ಕೆ ಸೇರಿದವರು ಸಂಭಳದ ಬಗ್ಗೆ ಕೆಳಲು ಯಾವಗಲು ಬರುತ್ತಾರೆ. ಮೊದಲು ಈ ಹುಡುಗಿ ಹಾಗೆ ಪರಿಚಯವಾದಳು. ನನ್ನ ಅಫಿಸಿನ ಕ್ಯಾಬ್ ನಲ್ಲಿ ಬರುತ್ತಿದ್ದಳು. ನಾನು ಜಾಸ್ತಿ ಮಾತಾಡು ತ್ತಿರಲಿಲ್ಲ. ಓಮ್ಮೆ ಹೀಗೆ ಮಾತಾಡುವಾಗ ತಿಳಿಯಿತು ಅವಳು ತುಂಬ ಒಳ್ಳೆ ಹುಡುಗಿ ಬದುಕಿನಲ್ಲಿ ನಡೆದ ಯಾವುದೊ ಕಹಿ ಘಟನೆ ಆಕೆಯಲ್ಲಿ ಕೆಟ್ಟ ಚಟಗಳನ್ನು ರೂಢಿಮಾಡಿವೆ. ಅ ಹುಡುಗಿ ಎಷ್ಟು ಮುಗ್ಧೆ ಎಲ್ಲರನ್ನು ತನ್ನವರಂತೆ ಕಾಣುತ್ತಿದ್ದಳು. ಯಾರು ಏನು ಹೇಳಿದರು ತಲೆಕೆಡಸಿಕೊಳ್ಳದ ಗುಣ. ನಮ್ಮ ಅಫಿಸ್ನ ಸೆಕ್ಯುರಿಟಿ ಮಕ್ಕಳಿಗೆ ತನ್ನ ದುಡಿಮೆಯ ಒಂದು ಭಾಗ ಕೊಡುತ್ತೀದ್ದಳು. ನನಗೆ ಅವಳ ಮೇಲಿದ್ದ ಅನಿಸಿಕೆ ಬದಲಾಯಿತು.